https://x.com/Sandeep98886864/status/2095904219241029786@kea ಹಾಗೂ
https://t.me/INCKarnataka ಸರ್ಕಾರದ ಗಮನಕ್ಕೆ 🙏
ಸರ್ಕಾರಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೆಲ್ಲರೂ ಕೋಟ್ಯಾಧಿಪತಿ ಕುಟುಂಬದಿಂದ ಬಂದವರಲ್ಲ. ಬಹುತೇಕ ವಿದ್ಯಾರ್ಥಿಗಳು #ಮಧ್ಯಮ ಹಾಗೂ ಬಡ ಕುಟುಂಬಗಳ ಹಿನ್ನೆಲೆಯಿಂದ ಬಂದು, ತಮ್ಮ ಭವಿಷ್ಯಕ್ಕಾಗಿ ಕಷ್ಟಪಟ್ಟು ತಯಾರಿ ನಡೆಸುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ಮೊದಲು ಅರ್ಥಮಾಡಿಕೊಳ್ಳಿ.
ಮೊದಲು ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯ ಅರ್ಜಿ ಶುಲ್ಕ ₹400 ಇತ್ತು. ಇದೀಗ
https://t.me/KEA_karnataka ಅದನ್ನು ₹750ಕ್ಕೆ ಹೆಚ್ಚಿಸಿದೆ. ಇದರ ಮೇಲಾಗಿ, ಗಾಯದ ಮೇಲೆ ಬರೆ ಎಳೆದಂತೆ ಅಭ್ಯರ್ಥಿಗಳಿಗೆ ದೂರದ ಜಿಲ್ಲೆಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನೀಡಲಾಗುತ್ತಿದೆ.
ಪರೀಕ್ಷಾ ಕೇಂದ್ರಕ್ಕೆ ತೆರಳಲು ಒಬ್ಬ ವಿದ್ಯಾರ್ಥಿಗೆ ಸರಾಸರಿ ₹2,000 ಅಥವಾ ಅದಕ್ಕಿಂತ ಹೆಚ್ಚಿನ ಹೆಚ್ಚುವರಿ ಪ್ರಯಾಣ ವೆಚ್ಚವಾಗುತ್ತದೆ. ಒಂದು ತಿಂಗಳಲ್ಲಿ ಕನಿಷ್ಠ 3 ಸರ್ಕಾರಿ ಪರೀಕ್ಷೆಗಳು ನಡೆದರೆ, ಪರೀಕ್ಷಾ ಶುಲ್ಕ ಮತ್ತು ಪ್ರಯಾಣ ವೆಚ್ಚಕ್ಕಾಗಿಯೇ ವಿದ್ಯಾರ್ಥಿಗಳು ತಿಂಗಳಿಗೆ ₹8,000ಕ್ಕೂ ಹೆಚ್ಚು ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇಷ್ಟೆಲ್ಲಾ ಆರ್ಥಿಕ ಒತ್ತಡದ ನಡುವೆ, ದೂರದ ಊರಿಗೆ ಪ್ರಯಾಣಿಸಿ, ಇಡೀ ರಾತ್ರಿ ನಿದ್ದೆಯಿಲ್ಲದೆ ಪರೀಕ್ಷಾ ಕೇಂದ್ರ ತಲುಪಿದ ವಿದ್ಯಾರ್ಥಿ ಬೆಳಗ್ಗೆ ಹೇಗೆ ಲವಲವಿಕೆಯಿಂದ ಹಾಗೂ ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಸಾಧ್ಯ?
https://t.me/CMofKarnataka ಹಾಗೂ
https://t.me/DKShivakumar ನಮ್ಮ ಮನವಿ ಇಷ್ಟೇ:
👉 ಮುಂದಿನ ದಿನಗಳಲ್ಲಿ ಪರೀಕ್ಷಾ ಅರ್ಜಿಯಲ್ಲಿಯೇ ಅಭ್ಯರ್ಥಿಗಳು ತಮ್ಮ ಆಯ್ಕೆಯ ಜಿಲ್ಲೆ/ಪರೀಕ್ಷಾ ಕೇಂದ್ರದ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿ.
👉 ಸಾಧ್ಯವಾದಷ್ಟು ಅಭ್ಯರ್ಥಿಗಳಿಗೆ ತಮ್ಮ ಸ್ವಂತ ಜಿಲ್ಲೆ ಅಥವಾ ಸಮೀಪದ ಜಿಲ್ಲೆಗಳಲ್ಲೇ ಪರೀಕ್ಷಾ ಕೇಂದ್ರ ನೀಡುವ ವ್ಯವಸ್ಥೆ ಮಾಡಿ.
👉 ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಅವರ ಮೇಲಿನ ಅನಗತ್ಯ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ.
ಸರ್ಕಾರಿ ಉದ್ಯೋಗಕ್ಕಾಗಿ ಹೋರಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರವೇ ಮತ್ತೊಂದು ಆರ್ಥಿಕ ಸವಾಲಾಗಬಾರದು.
ವಿದ್ಯಾರ್ಥಿಗಳ ಭವಿಷ್ಯದ ಪರವಾಗಿ KEA ಹಾಗೂ ಸರ್ಕಾರ ತಕ್ಷಣ ಸ್ಪಂದಿಸಿ ಈ ಸಮಸ್ಯೆಯನ್ನು ಬಗೆಹರಿಸಲಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ. 🙏
ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ
#KEA #KPSC #Karnataka #StudentIssues #GovernmentExams@KSVS2025