ಹಿಂದೆ KPSC / KEA ಪರೀಕ್ಷೆಗಳಿಗೆ 5–6 ತಿಂಗಳ ತಯಾರಿ ಸಾಕಾಗುತ್ತಿತ್ತು. ಒಂದೆರಡು ಗೈಡ್ಗಳು, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಓದಿದರೆ ಸಾಕು ಎನ್ನುವ ಕಾಲವಿತ್ತು.
ಆದರೆ ಇತ್ತೀಚಿನ ಪ್ರಶ್ನೆ ಪತ್ರಿಕೆಗಳನ್ನು ಅವಲೋಕಿಸಿದಾಗ ಸ್ಪಷ್ಟವಾಗಿ ಕಾಣುವುದು –
✅ ನೇರ ಪ್ರಶ್ನೆಗಳ ಬದಲು Statement-based / ವಿಶ್ಲೇಷಣಾತ್ಮಕ ಪ್ರಶ್ನೆಗಳು
✅ ಕರೆಂಟ್ ಅಫೇರ್ಸ್ ಹಾಗೂ ಕರ್ನಾಟಕ ಕೇಂದ್ರಿತ ವಿಷಯಗಳಿಗೆ ಹೆಚ್ಚಿನ ಒತ್ತು
✅ ಉರು ಹೊಡೆದರೆ ಸಾಲದು, Concept Clarity ಕಡ್ಡಾಯ
ಈ ನಿಟ್ಟಿನಲ್ಲಿ, ಕರೆಂಟ್ ಅಫೇರ್ಸಿಗೆ ಪ್ರತಿದಿನ 1 ಗಂಟೆ Extra ಮೀಸಲಿಡಲೇಬೇಕಾಗಿದೆ.
⏳ ಹಾಗಾಗಿ –
🔹 ಫುಲ್ ಟೈಮ್ ಓದುವವರಿಗೆ (ಪ್ರತಿದಿನ 8–10 ಗಂಟೆ) – ಕನಿಷ್ಠ 8 ತಿಂಗಳು
🔹 JOB / ಗೃಹಿಣಿ / ಕಾಲೇಜು ವಿದ್ಯಾರ್ಥಿಗಳಿಗೆ (ಪ್ರತಿದಿನ 4–5 ಗಂಟೆ) – ಕನಿಷ್ಠ 12 ತಿಂಗಳು
Keep it in mind. 🙏
ಸರ್ಕಾರಿ ಹುದ್ದೆ ಪಡೆಯಲೇಬೇಕು ಎನ್ನುವ ಛಲ ನಿಮ್ಮಲ್ಲಿದ್ದರೆ, ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ. ಯಾವುದೇ ಕ್ಷಣಿಕ ಕಿಕ್ ಇಲ್ಲದೆ, ತಿಂಗಳುಗಟ್ಟಲೆ ಸ್ಥಿರವಾಗಿ ಕುಳಿತು ಓದಬೇಕಾಗುತ್ತದೆ.
👉 ವಯಸ್ಸು ಚಿಕ್ಕದಿದ್ದರೆ – ಒಮ್ಮೆ ಎಲ್ಲವನ್ನೂ ಬದಿಗಿಟ್ಟು ಪೂರ್ಣ ಮನಸ್ಸಿನಿಂದ ಓದಿಬಿಡಿ. ಈ ತಯಾರಿಯ ಜ್ಞಾನ PSI, FDA, SDA, VAO, Group-C – ಎಲ್ಲ ಪರೀಕ್ಷೆಗಳಲ್ಲೂ ನಿಮ್ಮ ಕೈ ಹಿಡಿಯುತ್ತದೆ.
👉 ಉದ್ಯೋಗಿಗಳು – ತಕ್ಷಣವೇ JOB ಬಿಡಬೇಡಿ. ಉದ್ಯೋಗ ಮಾಡುತ್ತಲೇ ಸ್ವಲ್ಪ ಸ್ವಲ್ಪ ಮುಗಿಸುತ್ತಾ ಬನ್ನಿ.
👉 ಕಾಲೇಜು ವಿದ್ಯಾರ್ಥಿಗಳು – ಇಂದೇ ದಿನಪತ್ರಿಕೆ ಓದಲು ಆರಂಭಿಸಿ.
👉 ಗೃಹಿಣಿಯರು – ಮನೆಯಲ್ಲಿ ಬೆಂಬಲವಿದ್ದು, ದಿನಕ್ಕೆ ಕನಿಷ್ಠ 3 ಗಂಟೆ ಓದಲು ಸಾಧ್ಯವಿದ್ದರೆ ಮೊದಲು ಬೇಸಿಕ್ನಿಂದ ಆರಂಭಿಸಿ.
📌 2025 ರಲ್ಲಿ ಶ್ರೀ ಗುರುಕುಲ ಅಕಾಡೆಮಿ ಆರಂಭವಾದಾಗ ಇದ್ದ KPSC / KEA ಪ್ರಶ್ನೆ ಪತ್ರಿಕೆ ಮಾದರಿಗೂ, ಈಗಿನ ಮಾದರಿಗೂ ಅಜಗಜಾಂತರ ವ್ಯತ್ಯಾಸವಿದೆ.
ಅದಕ್ಕೆ ತಕ್ಕಂತೆ ನಮ್ಮ ಅಕಾಡೆಮಿಯಲ್ಲೂ ಹಲವಾರು ಹೊಸ ಬದಲಾವಣೆಗಳನ್ನು ತರುತ್ತಿದ್ದೇವೆ – ಹೊಸ ಮಾದರಿಯ ಪ್ರಶ್ನೆಗಳಿಗೆ ತಕ್ಕ ತರಗತಿಗಳು, Daily Current Affairs, ಟೆಸ್ಟ್ ಸಿರೀಸ್… ಶೀಘ್ರದಲ್ಲೇ ಜಾರಿಗೆ ಬರಲಿವೆ. ನಿರೀಕ್ಷಿಸಿ… 🔥
📲 ಹೊಸ ಬ್ಯಾಚುಗಳು ಈಗ ನಮ್ಮ ಶ್ರೀ ಗುರುಕುಲ ಅಕಾಡೆಮಿ App ನಲ್ಲಿ ಲಭ್ಯ! ಇಂದೇ App ಡೌನ್ಲೋಡ್ ಮಾಡಿ, ನಿಮಗೆ ಸೂಕ್ತವಾದ ಬ್ಯಾಚ್ ಆಯ್ಕೆಮಾಡಿ.
🔗 https://play.google.com/store/apps/details?id=co.jones.ewmqx
💪 ಬಲ ನಿಮ್ಮದು, ಬೆಂಬಲ ನಮ್ಮದು.
ಶುಭವಾಗಲಿ 💐
– ಶ್ರೀ ಗುರುಕುಲ ಅಕಾಡೆಮಿ













![ಸ್ಪರ್ಧಾ ವೇದಿಕೆ [NEVER GIVE UP] 📚 Telegram channel](https://cdn.tgdio.com/channels/2026/03/POLICE_ASPIRANTS.webp)